ಗೋವಿಂದನ್ ಸುಂದರರಾಜನ್ ಅವರು ಇ೦ಡಿಯನ್ ಮೆಟೀರಿಯಲ್ಸ್ ಎಂಜಿನಿಯರ್ ಆಗಿದ್ದು, ಸರ್ಫೇಸ್ ಇಂಜಿನಿಯರಿಂಗ್ ಮತ್ತು ಬ್ಯಾಲಿಸ್ಟಿಕ್ಸ್ ಕ್ಷೇತ್ರಗಳಲ್ಲಿ ಅವರ ಕೊಡುಗೆಗಳಿಗೆ ಹೆಸರುವಾಸಿಯಾಗಿದ್ದಾರೆ. ಭಾರತ ಸರ್ಕಾರವು ೨೦೧೪ ರಲ್ಲಿ ಅವರಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಿಗೆ ನೀಡಿದ ಕೊಡುಗೆಗಳಿಗಾಗಿ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತು . == ಜೀವನಚರಿತ್ರೆ == ಗೋವಿಂದನ್ ಸುಂದರರಾಜನ್ ಅವರು ಆಂಧ್ರಪ್ರದೇಶದಲ್ಲಿ ೧೧ ಡಿಸೆಂಬರ್ ೧೯೫೩ ರ೦ದು ಜನಿಸಿದರು. ಅವರು ೧೯೭೬ ರಲ್ಲಿ ಮದ್ರಾಸ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಮೆಟಲರ್ಜಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ, ನಂತರ ೧೯೭೯ ರಲ್ಲಿ ಸ್ನಾತಕೋತ್ತರ ಪದವಿ (ಎಮ್.ಎಸ್) ಮತ್ತು ೧೯೮೧ ರಲ್ಲಿ ಓಹಿಯೋ ಸ್ಟೇಟ್ ಯೂನಿವರ್ಸಿಟಿ, ಕೊಲಂಬಸ್, ಯು.ಎಸ್.ಎ ಯಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಅವರು ಡಿಫೆನ್ಸ್ ಮೆಟಲರ್ಜಿಕಲ್ ರಿಸರ್ಚ್ ಲ್ಯಾಬೋರೇಟರಿ (ಡಿ.ಎಮ್.ಆರ್.ಎಲ್) ನಲ್ಲಿ ವಿಜ್ಞಾನಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಲು ೧೯೮೨ರಲ್ಲಿ ಭಾರತಕ್ಕೆ ಮರಳಿದರು. ೧೯೯೭ ರಲ್ಲಿ ಅವರು ಇಂಟರ್ನ್ಯಾಷನಲ್ ಅಡ್ವಾನ್ಸ್ಡ್ ರಿಸರ್ಚ್ ಸೆಂಟರ್ ಫಾರ್ ಪೌಡರ್ ಮೆಟಲರ್ಜಿ ಮತ್ತು ನ್ಯೂ ಮೆಟೀರಿಯಲ್ಸ್ (ಎ.ಆರ್.ಸಿ.ಐ) ನ ನಿರ್ದೇಶಕರಾಗಿ ಸೇರಿ, ಪ್ರಸ್ತುತ ಇದೇ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. == ಪರಂಪರೆ == ಸುಂದರರಾಜನ್ ಅವರು ವಸ್ತುಗಳು ಮತ್ತು ಸಂಯುಕ್ತಗಳ ಟ್ರಿಬಲಾಜಿಕಲ್ ನಡವಳಿಕೆಯ ಬಗ್ಗೆ ವ್ಯಾಪಕವಾದ ಸಂಶೋಧನೆಯನ್ನು ಮಾಡಿರುತ್ತಾರೆ. ವಿಶೇಷ ಲೇಪನಗಳಲ್ಲಿ ಪರಿಣಿತರಾಗಿರುವ ಗೋವಿಂದರಾಜನ್ ಅವರ ಸಂಶೋಧನೆಗಳು ಕಾವೇರಿ ಇಂಜಿನ್ ಪ್ರೋಗ್ರಾಂ ( -35VS ಕಾವೇರಿ) ಗಾಗಿ ಸುಧಾರಿತ ಥರ್ಮಲ್ ಸ್ಪ್ರೇ ಲೇಪನವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಿದೆ. ಎ.ಆರ್.ಸಿ.ಐ ಸೆಂಟರ್ ಫಾರ್ ಲೇಸರ್ ಪ್ರೊಸೆಸಿಂಗ್ ಆಫ್ ಮೆಟೀರಿಯಲ್ಸ್, ಎ.ಆರ್.ಸಿ.ಐ ಸರ್ಫೇಸ್ ಇಂಜಿನಿಯರಿಂಗ್ ವಿಭಾಗ, ಸೆಂಟರ್ ಫಾರ್ ಫ್ಯೂಯೆಲ್ ಸೆಲ್ ಟೆಕ್ನಾಲಜಿ, ಚೆನ್ನೈ ಮತ್ತು ಎ.ಆರ್.ಸಿ.ಐ ಸೆಂಟರ್ ಫಾರ್ ಸೋಲ್-ಜೆಲ್ ನ್ಯಾನೊಕಾಂಪೊಸಿಟ್ ಕೋಟಿಂಗ್‌ಗಳಂತಹ ಅನೇಕ ಮುಂದುವರಿದ ಸಂಶೋಧನಾ ಸೌಲಭ್ಯಗಳ ಸ್ಥಾಪನೆಗಳಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಗೋವಿಂದರಾಜನ್ ಅವರ ವಿನ್ಯಾಸ ಮತ್ತು ತಯಾರಿಕೆಯ ಸಾಮರ್ಥ್ಯಗಳಿಗೆ ಇದುವೇ ಸಾಕ್ಷಿಯಾಗಿದೆ. ಅವರ ನಾಯಕತ್ವದಲ್ಲಿ, ಅಡ್ವಾನ್ಸ್ಡ್ ಮೆಟೀರಿಯಲ್ಸ್ ಟೆಕ್ನಾಲಜಿ ಇನ್ಕ್ಯುಬೇಟರ್ (ಎ.ಎಮ್.ಟಿ), ಎ.ಆರ್.ಸಿ.ಐ ಉದ್ಯಮವನ್ನು ಸ್ಥಾಪಿಸಲಾಯಿತು. ಇದು ಪ್ರಸ್ತುತ ಐದು ಕಂಪನಿಗಳಿಗೆ ನೆಲೆಯಾಗಿದೆ. ಅವರು ಎ.ಆರ್.ಸಿ.ಐ ಪರವಾಗಿ ತಂತ್ರಜ್ಞಾನಗಳನ್ನು ವಾಣಿಜ್ಯೀಕರಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವರದಿಯಾಗಿದೆ. ಇನ್ಕ್ಯುಬೇಟರ್ ಕಾರ್ಯಕ್ರಮದ ಅಡಿಯಲ್ಲಿ ಎಲ್ಲಾ ಐದು ಕಂಪನಿಗಳು ಎ.ಆರ್.ಸಿ.ಐ ನ ತಂತ್ರಜ್ಞಾನ ವರ್ಗಾವಣೆಯ ಫಲಾನುಭವಿಗಳಾಗಿವೆ. ಗೋವಿಂದರಾಜನ್ ಅವರು ಅನೇಕ ಆವಿಷ್ಕಾರಗಳನ್ನು ಮಾಡಿದ್ದಾರೆ ಅಲ್ಲದೆ ೫ ಪೇಟೆಂಟ್‌ಗಳನ್ನು ಸಹ ಹೊಂದಿದ್ದಾರೆ. " " ( ). (). 14 2009. 1 2014. " " ( ). (). 17 2012. 1 2014. " " ( ). (). 14 2009. 1 2014. " " ( ). (). 2 2002. 1 2014. " " ( ). (). 2 2002. 1 2014. ಸುಂದರರಾಜನ್ ಅವರು ಅನೇಕ ಸೆಮಿನಾರ್‌ಗಳು ಮತ್ತು ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ, ಅಲ್ಲಿ ಅವರು ಮುಖ್ಯ ಭಾಷಣಗಳನ್ನೂ ಮಾಡಿದ್ದಾರೆ. ಅವರು ಹಲವಾರು ಲೇಖನಗಳನ್ನು ಪ್ರಕಟಿಸಿದ್ದು, ೧೭೦ ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಅವು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪೀರ್ ರಿವ್ಯೂಡ್ ಜರ್ನಲ್‌ಗಳಲ್ಲಿ ಪ್ರಕಟವಾಗಿವೆ. ; ; Araújo; ; ; José (2008). " ". . 1 2014. ; (7 2010). "- β-–SiO2 : ". . 93 (10): 3180–3189. :10.1111/.1551-2916.2010.03885.. ; . ; ; . ; ; . ; ; (2013). " - TiO2 , , ". . 293: 229–247. :10.1016/..2013.12.140. 1 2014. (2008). " ". . 17 (4): 551–563. :10.1007/s11666-008-9206-0. == ಪ್ರಶಸ್ತಿಗಳು ಮತ್ತು ಮನ್ನಣೆಗಳು == ಗೋವಿಂದನ್ ಸುಂದರರಾಜನ್ ಅವರು ೧೯೯೪ರಲ್ಲಿ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ, ಭಾರತ ಸರ್ಕಾರದ ಗೌರವಗಳು ಸೇರಿದಂತೆ ಅನೇಕ ಪ್ರಶಸ್ತಿಗಳು ಮತ್ತು ಗೌರವಗಳನ್ನು ಪಡೆದಿದ್ದಾರೆ. ಅವರು ೧೯೯೫ ರಲ್ಲಿ ಅತ್ಯುತ್ತಮ ಮೆಟಲರ್ಜಿಸ್ಟ್ ಪ್ರಶಸ್ತಿ ಮತ್ತು ೨೦೦೪ರಲ್ಲಿ ಮೆಟೀರಿಯಲ್ಸ್ ಸೈನ್ಸ್‌ಗಾಗಿ ಎಫ಼್.ಐ.ಸಿ.ಸಿ.ಐ ಪ್ರಶಸ್ತಿಯನ್ನು ಪಡೆದಿದ್ದಾರೆ. ೧೯೯೨ ರಲ್ಲಿ ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್, ೧೯೯೬ ರಲ್ಲಿ ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿ, ೧೯೯೯ ರಲ್ಲಿ ಇಂಡಿಯನ್ ನ್ಯಾಷನಲ್ ಅಕಾಡೆಮಿ ಆಫ್ ಇಂಜಿನಿಯರಿಂಗ್, ೨೦೦೨ ರಲ್ಲಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ ಹಾಗು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮೆಟಲ್ಸ್ ಮತ್ತು ೨೦೦೫ ರಲ್ಲಿ ಎ.ಎಸ್.ಎಮ್ ಇಂಟರ್ನ್ಯಾಷನಲ್ ಸಂಸ್ಥೆಗಳು ಸುಂದರರಾಜನ್ ಅವರಿಗೆ ಫೆಲೋಶಿಪ್ ನೀಡಿ ಗೌರವಿಸಿವೆ. ೨೦೦೬-೨೦೧೧ರ ಅವಧಿಯಲ್ಲಿ ಜೆಸಿ ಬೋಸ್ ಫೆಲೋಶಿಪ್ ಕೂಡ ಪಡೆದಿದ್ದಾರೆ. ಭಾರತ ಸರ್ಕಾರವು ಸುಂದರರಾಜನ್ ಅವರನ್ನು ೨೦೧೪ ರ ಗಣರಾಜ್ಯೋತ್ಸವದ ಗೌರವಗಳಲ್ಲಿ ಸೇರಿಸುವ ಮೂಲಕ ಹಾಗು ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತು. == ಉಲ್ಲೇಖಗಳು == == ಹೆಚ್ಚಿನ ಓದುವಿಕೆ == ; ; Araújo; ; ; José (2008). " ". . 1 2014. ; (7 2010). "- β-–SiO2 : ". . 93 (10): 3180–3189. :10.1111/.1551-2916.2010.03885.. ; . ; ; . ; ; . ; ; (2013). " - TiO2 , , ". . 293: 229–247. :10.1016/..2013.12.140. 1 2014. (2008). " ". . 17 (4): 551–563. :10.1007/s11666-008-9206-0. == ಬಾಹ್ಯ ಕೊಂಡಿಗಳು == "" (). .. 2011. () 24 ಜೂನ್ 2016. 1 2014.